
ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಸಹಕಾರ ಚಳವಳಿಯಲ್ಲಿ ಕೃಷಿಕರ ನೇತೃತ್ವವಿದೆ
- Feb/08/2023
ಉತ್ತರ ಕನ್ನಡ ಜಿಲ್ಲೆ ಪ್ರಜ್ಞಾವಂತರ ಜಿಲ್ಲೆ. ಇಡೀ ರಾಜ್ಯದಲ್ಲಿ ಎರಡು ಜಿಲ್ಲೆ ಸಾರ್ವಭೌಮ ಭಾಷೆ ಕನ್ನಡದ ಹೆಸರು ಇಟ್ಟುಕೊಂಡಿವೆ. ಅದರೊಳಗೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಎಂದೂ ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಬಣ್ಣಿಸಿದರು.
ಅವರು ಬುಧವಾರ ಕರ್ಣಾಟಕ ಬ್ಯಾಂಕ್ ಶಿಕ್ಷಣಕ್ಕಾಗಿ ಬೆಳಕು ಯೋಜನೆಗೆ ಸೆಲ್ಕೋ ಸೋಲಾರ್
ಸಂಸ್ಥೆ, ಭಾರತೀಯ ವಿಕಾಸ ಟ್ರಸ್ಟ, ವಿಶ್ವಶಾಂತಿ ಸೇವಾ ಟ್ರಸ್ಟ್ ಜಂಟಿಯಾಗಿ
ಹಮ್ಮಿಕೊಂಡ ಕೃತಜ್ಞತಾ ಸಮಾರಂಭದಲ್ಲಿ ಫಲಾನುಭವಿ ವಿದ್ಯಾರ್ಥಿಗಳಿಗೆ ಸೋಲಾರ್ ಬೆಳಕಿನ ಘಟಕದಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಲಾಭದಲ್ಲಿ ಸಮಾಜಕ್ಕೆ ಒಂದಂಶ ಅರ್ಪಿಸಬೇಕು ಎಂದು ಕರ್ಣಾಟಕ ಬ್ಯಾಂಕ್ ಸೇವೆ
ಸಲ್ಲಿಸುತ್ತಿದ್ದು, ಅದರ ಭಾಗವಾಗಿ ಶಿಕ್ಷಣಕ್ಕಾಗಿ ಬೆಳಕು ಯೋಜನೆ ಸೆಲ್ಕೋದ ಜೊತೆಗೆ
ಅನುಷ್ಠಾನವಾಗುತ್ತಿದೆ. ಇದು ಅಕ್ಷರಶಃ ಮಕ್ಕಳ ಓದಿಗೆ, ಶೈಕ್ಷಣಿಕ ಬೆಳವಣಿಗೆಗೆ
ನೆರವಾಗಿದೆ ಎಂಬ ಸಮಾಧಾನವಿದೆ. ಬ್ಯಾಂಕ್‌ನ ದೃಷ್ಟಿಯಲ್ಲಿ ಇದು ಖರ್ಚಲ್ಲ, ಸಮಾಜದ
ಬದ್ಧತೆಯ ದೃಷ್ಟಿಯಲ್ಲಿ ವಿನಿಯೋಗ ಮಾಡಲಾಗುತ್ತಿದೆ ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಬದುಕಿಗ ಬೆಳಕು ಕೊಡುವ ಯೋಜನೆ
ರೂಪಿಸಿದ್ದಕ್ಕೆ ಅಭಿನಂದನೆಗಳು. ವಿದ್ಯಾಭ್ಯಾಸದ ದೃಷ್ಟಿಯಲ್ಲಿ ಇದು ಕೆಲಸ
ಮಾಡುತ್ತಿರುವದು ಶ್ರೇಷ್ಠ ಕೆಲಸವಾಗಿದೆ. ಮಗುವಿನ ಮೂಲಭೂತಕ್ಕ ಯೋಜಿಸಿ ಯೋಜನೆ
ರೂಪಿಸಿದ್ದು ಅಭಿನಂದನೀಯ ಎಂದರು.
ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಮಾತನಾಡಿ ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೋ ಜೊತೆಯಾಗಿ ಬೆಳಕು ನೀಡಲಾಗಿದೆ. ಇದು ಬ್ಯಾಂಕ್‌ನ ಮಹಾಬಲೇಶ್ವರ ಎಂ.ಎಸ್.ಅವರ ಕನಸಿನಿಂದ ಇದು ಆಗಿದೆ. ಈವರೆಗೆ ಈ ಯೋಜನೆಯಲ್ಲಿ ೭೫೪ ಮನೆಗಳಿಗೆ ಸೌರ ಬೆಳಕು ನೀಡಲಾಗಿದೆ.
ಕರ್ಣಾಟಕ ಬ್ಯಾಂಕ್ ಉಡುಪಿ ಎಜಿಎಂ ರಾಜಗೋಪಾಲ, ಶಿವಮೊಗ್ಗ ಎಜಿಎಂ ಹಯವದನ ಉಪಾಧ್ಯಾಯ,
ಬಿವಿಟಿಯ ಮನೋಹರ ಕಟಗೇರಿ, ಡಿಡಿಪಿಐ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್
ನಾಯ್ಕ, ವಿಶ್ವಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಇತರರು
ವೇದಿಕೆಯಲ್ಲಿ ಇದ್ದರು.