
ಭಾರತ ಸೇವಾದಳ ವಿವಿಧ ಶಿಕ್ಷಣ ತರಬೇತಿ ಶಿಬಿರ ಫೆಬ್ರುವರಿ 2023
- Feb/07/2023
ಭಾರತ ಸೇವಾದಳ ಜಿಲ್ಲಾ ಸಮಿತಿ ಶಿರಸಿ ಇದರ ಆಶ್ರಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ಇದರ ಸಹಯೋಗದೊಂದಿಗೆ ಶಿಕ್ಷಕ/ಕಿಯರಿಗೆ ಜಿಲ್ಲಾ ಮಟ್ಟದಲ್ಲಿ ಯೋಗಶಿಕ್ಷಣ, ನೈತಿಕ ಶಿಕ್ಷಣ, ಹಾಗೂ ಸಹಾಯಕ ಶಿಕ್ಷಣ ತರಬೇತಿ
ಭಾರತ ಸೇವಾದಳ ಜಿಲ್ಲಾ ಸಮಿತಿ ಶಿರಸಿ ಇದರ ಆಶ್ರಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆಇದರ ಸಹಯೋಗದೊಂದಿಗೆ ಶಿಕ್ಷಕ/ಕಿಯರಿಗೆ ಜಿಲ್ಲಾ ಮಟ್ಟದಲ್ಲಿ ಯೋಗಶಿಕ್ಷಣ, ನೈತಿಕ ಶಿಕ್ಷಣ, ಹಾಗೂ ಸಹಾಯಕ ಶಿಕ್ಷಣ ತರಬೇತಿ ಶಿಬಿರವು ದಿನಾಂಕ : ೦೬/೦೨/೨೦೨೩ ರಿಂದ ದಿನಾಂಕ : ೧೧/೦೨/೨೦೨೩ ರವರೆಗೆ ಆಯೋಜನೆಗೊಂಡಿತು. ಶಿಬಿರಾರ್ಥಿಗಳ ನೊಂದಣಿ ಕಾರ್ಯದ ನಂತರ ೧೨.೦೦ ಘಂಟೆಗೆ ಸರಿಯಾಗಿ ಕಾರ್ಯಕ್ರಮವನ್ನು ಗೌರವರಕ್ಷೆ ಸ್ವೀಕಾರ ಹಾಗೂ ಸರ್ವಧರ್ಮ ಪ್ರಾರ್ಥನೆಯೊಂದಿಗೆಪ್ರಾರಂಭಿಸಲಾಯಿತು. ಶ್ರೀ. ಎಂ.ಕೆ. ನಾಯ್ಕ ಶಿಕ್ಷಣ ಸಂಯೋಜಕರು ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣ ಇಲಾಖೆಗೆ ಪೂರಕವಾದ ಚಟುವಟಿಕೆಗಳನ್ನು ನೀಡುವ ಸೇವಾದಳ ತರಬೇತಿ ಪಡೆದು ಪರಿಣಾಮ ಮಕ್ಕಳಲ್ಲಿ ಮೂಡಿಸಲು ಶಿಕ್ಷಕರುಸಹಕರಿಸಬೇಕು. ನಾವು ಚೈತನ್ಯದ ಚಿಲುಮೆಯಂತಿದ್ದರೆ ಮಕ್ಕಳೂ ಕೂಡಾ ಚೈತನ್ಯದ ಚಿಲುಮೆಯಾಗಿ ಹೊಮ್ಮುತ್ತಾರೆ ಎಂದು ಹೇಳಿದರು.
ಸಭೆಯ ಅಧ್ಯಕ್ಷರು : ಶ್ರೀ ವಿ. ಎಸ್.ನಾಯಕ್ ಅಧ್ಯಕ್ಷರು ಭಾರತ ಸೇವಾದಳ ಜಿಲ್ಲಾ ಸಮಿತಿ ಇವರು ದೇಶಕ್ಕೆ ಪೂರಕವಾಗದ ಚಟುವಟಿಕೆಗಳನ್ನು ನೀಡುವ ಸೇವಾದಳ ಶಿಕ್ಷಣ ಮಕ್ಕಳಿಗೆ ತಲುಪಿಸುವ ಕೆಲಸ ನಮ್ಮಿಂದಾಗಬೇಕು ಎಂದರು .
ಬೆಳಿಗ್ಗೆ ೯-೦೦ ಘಂಟೆಗೆ ಸರಿಯಾಗಿ ರಾಯಪ್ಪ ಹುಲೇಕಲ್ ಶಾಲೆ ಇಲ್ಲಿನ ಧ್ವಜಕ್ಷೇತ್ರದಲ್ಲಿ ಧ್ವಜಾರೋಹಣದ ಮೂಲಕ ಪ್ರಾರಂಭಗೊಂಡಿತು. ಶ್ರೀ ಕುಮಾರ ಎಸ್. ನಾಯ್ಕ ಕೋಶಾಧ್ಯಕ್ಷರು, ಭಾರತ ಸೇವಾದಳ ತಾಲೂಕಾ ಸಮಿತಿ ಶಿರಸಿ ಇವರು ಧ್ವಜವಂದನೆ ಸ್ವೀಕರಿಸಿ ಸೇವಾದಳ ತತ್ವ ಆದರ್ಶ ಮೈಗೂಡಿಸಿಕೊಂಡು ದೇಶವನ್ನು ಬಲಪಡಿಸುವಲ್ಲಿ ತಮ್ಮ ಅಳಿಲು ಸೇವೆಯನ್ನು ನೀಡಲು ಮುಂದಾಗಬೇಕು ಎಂಬ ಮಾತನ್ನು ಹೇಳಿದರು. ಶ್ರೀ ರಾಮಚಂದ್ರ ಹೆಗಡೆ ಜಿಲ್ಲಾ ಸಂಘಟಕರು ಸಹಕರಿಸಿದರು
ಸಭೆಯಲ್ಲಿ ಶ್ರೀ ಅಶೋಕ ಬಿ. ಭಜಂತ್ರಿ ಭಾರತ ಸೇವಾದಳ ತಾಲೂಕಾ ಸಮಿತಿ ಅಧ್ಯಕ್ಷರು, ಪ್ರೊ. ಕೆ.ಎನ್. ಹೊಸಮನಿ ಜಿಲ್ಲಾ ಭಾರತ ಸೇವಾದಳ ಸಮಿತಿ ಕಾರ್ಯದರ್ಶಿ, ಶ್ರೀ ಕೆ.ಎನ್. ನಾಯ್ಕ ಭಾರತ ಸೇವಾದಳ ತಾಲೂಕಾ ಸಮಿತಿ ಸದಸ್ಯರು, ಶ್ರೀ ಎಂ. ಎಸ್. ಹೆಗಡೆ ಕ್ಷೇತ್ರಶಿಕ್ಷಣಾಧಿಕಾರಿಗಳು, ಶ್ರೀ ದಿನೇಶ ಶೇಟ್ ಕ್ಷೇತ್ರ ಸಮನ್ವಯಾಧಿಕಾರಿಗಳು, ಶ್ರೀ ಅಶೋಕ ತಾರೀಕೊಪ್ಪ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು (ಪ್ರಭಾರೆ) ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಸುಧಾಮ ಪೈ (ಶಿಕ್ಷಕರು), ಶ್ರೀ ಉದಯಕುಮಾರ ಎಸ್. ಹೆಗಡೆ (ಶಿಕ್ಷಕರು), ಶ್ರೀ ಬಾಬು ನಾಯ್ಕ (ಶಿಕ್ಷಕರು), ಶ್ರೀಮತಿ ಸಾವಿತ್ರಿ ಭಟ್ಟ (ಶಿಕ್ಷಕರು) ಶ್ರೀಮತಿ ಪುಲ್ಲಾರ ಡಿಸೋಜಾ (ಶಿಕ್ಷಕರು) ಶ್ರೀ ಸರ್ವೇಶ್ವರ ಎಂ. ಶೆಟ್ಟಿ (ಶಿಕ್ಷಕರು), ಕಾರ್ಯ ನಿರ್ವಹಿಸಿದರು. ಎಂ. ಎನ್. ಹೆಗಡೆ ಕಾರ್ಯಕ್ರಮ ರೂಪಿಸಿದರು. ಶ್ರೀ ರಾಮಚಂದ್ರ ಹೆಗಡೆ ಜಿಲ್ಲಾಸಂಘಟಕರು, ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿದರು. ಆರು ತಾಲೂಕುಗಳಿಂದ ೪೦ ಶಿಬಿರಾರ್ಥಿ ಶಿಕ್ಷಕರು ಹಾಜರಿದ್ದರು. ಶ್ರೀ ಬಾಬು
ನಾಯ್ಕ ತಾಲೂಕಾ ಸಂಘಟಕರು ಸಿದ್ದಾಪುರ ಇವರು ವಂದಿಸಿದರು.