ಧರೆಯ ಆವರಿಸಿದೆ ಮಂಜಿನ ಮುಸುಕು

  • Feb/11/2023
ದಟ್ಟ ಕಾನನದ ನಡುವಿನ ಮಲೆನಾಡಲ್ಲಿ ವಿಚಿತ್ರ ವಾತಾವರಣ ಉಂಟಾಗುತ್ತಿದೆ. ಒಮ್ಮೆ ಚಳಿ ಇನ್ನೊಮ್ಮೆ ಸೆಖೆ ಮತ್ತೊಮ್ಮೆ ಮೋಡದ ವಾತಾವರಣ ಬೆಳಂಬೆಳಗ್ಗೆ ಮಂಜಿನ ಲೀಲೆಗಳ ಅಬ್ಬರ....

ಹೌದು, ಪಶ್ಚಿಮಘಟ್ಟ ವ್ಯಾಪ್ತಿಯ ಈ ಪ್ರದೇಶದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ. ಸೆಖೆ ಅವಧಿ ಸಮೀಪಿಸಿದ್ದು ವಿಭಿನ್ನ ವಾತಾವರಣ ಸೃಷ್ಟಿಯಾಗುತ್ತಿದೆ. ನಡುಕ ಹುಟ್ಟಿಸಿತು. ಚಳಿಚಳಿ ತಾಳೆನೂ ಈ ಚಳಿಯಾ.. ಎಂದು ಗಡಗಡ ನಡಗುತ್ತಲೇ ಗುನುಗುವಂತಾಯಿತು. ಸಾಮಾನ್ಯವಾಗಿ ಮಳೆಗಾಲ ಮುಗಿದು ನವೆಂಬರ್ ಮಧ್ಯಭಾಗದಿಂದ ಚಳಿಗಾಲ ಆರಂಭವಾಗುತ್ತದೆ. ಆದರೆ ಈ ಬಾರಿ ನವೆಂಬರ್ ಇರಲಿ ಡಿಸೆಂಬರ್ ತಿಂಗಳಲ್ಲೂ ಚಳಿ ಅಷ್ಟಕ್ಕಷ್ಟೇ ಎನ್ನುವಂತಾಯಿತು. ಆದರೆ ಜನೇವರಿ ತಿಂಗಳ ಆರಂಭದ ಕೆಲದಿನ ಸ್ವಲ್ಪ ಚಳಿಯ ಅನುಭವವಾಗಿತ್ತು. ಆದರೆ ತಿಂಗಳ ಕೊನೆಯ ವಾರದಲ್ಲಿ ಮಾತ್ರ ಒಮ್ಮೆಲೆ ಚಳಿ ತನ್ನ ಪ್ರತಾಪ ತೋರಿತ್ತು.

ಸಂಜೆಯಾಗುತ್ತಲೇ ನಿಧಾನವಾಗಿ ಥಂಡಾ ಅನುಭವ ಶುರುವಾದರೆ ನಂತರ ಎಷ್ಟು ಹೊದಿಕೆ ಹೊದ್ದರೂ ತಾಳಲಾರದಷ್ಟು ಚಳಿಯಾಗುತ್ತಿದೆ. ಬೆಳಗಾದರೂ ಹೊದಿಕೆಯಿಂದ ಹೊರಬರಲಾಗದಷ್ಟು ಚಳಿ. ಎದ್ದು ಮನೆಯ ಬಾಗಿಲು ತೆಗೆಯಲು ಹೊರಟರೆ ಮೈಮನ ಮತ್ತಷ್ಟು ಕೂಲ್‌ಕೂಲ್.. ಇದರಿಂದ ಹೊರಭಾಗಕ್ಕೆ ಹೋಗುವುದಕ್ಕೆ ಹಿಂಜರಿಕೆಯ ಭಾವ ಉಂಟಾಗುತ್ತಿದೆ. ಹೊರಭಾಗದಲ್ಲಿ ದಿಟ್ಟಿಸಿ ನೋಡಿದರೆ ಬೆಳ್ಳನೆಯ ಮಂಜು, ಮನೆಯ ಶೆಡ್‌ಗಳು ಇಬ್ಬನಿಯಿಂದ ತೋಯ್ದ ಸನ್ನಿವೇಶ ಮನೋಲ್ಲಾಸ ಮೂಡಿಸುವಂತಿದೆ. ಅದರಲ್ಲೂ ಕಾನನ ಮಧ್ಯೆ ಸೂರ್ಯನ ಕಿರಣಗಳು ಮಂಜನ್ನು ಸೀಳಿ ಭೂಮಿಯತ್ತ ಚಾಚುವ ದೃಶ್ಯ ನಯನ ಮನೋಹರವಾಗಿದೆ. ಮಲೆನಾಡಿನ ಹಳ್ಳಿಗಳ ಕಾನನ, ಅಡಕೆ ತೋಟಗಳ ಆಸುಪಾಸು ಹೊಳೆ, ಹಳ್ಳಗಳು ಜುಳುಜುಳು ನಾದದಲ್ಲಿ ಹರಿಯುತ್ತವೆ. ಅಲ್ಲೆ ಅಕ್ಕಪಕ್ಕದಲ್ಲಿರುವ ಇರುವ ಮನೆಗಳಲ್ಲಿ ಮೈ ಗಡಗುಡುವ ಚಳಿಯ ಅನುಭವ. ಅಬ್ಬಾ ಎಂಥಾ ಚಳಿಯಪ್ಪಾ ಎಂದು ಉದ್ಘರಿಸುವ ಸನ್ನಿವೇಶ. ಎಷ್ಟೊತ್ತಿಗೆ ಸೂರ್ಯನ ಬಿಸಿಲಿಗೆ ಮೈ ಒಡ್ಡಬಹುದು ಎಂಬುದಕ್ಕೆ ಕಾಯುವಂತಾಗುತ್ತಿದೆ. ಎಷ್ಟೇ ಪ್ರಖರ ಬಿಸಿಲು ಆವರಿಸಿದರೂ ಇಡೀ ದಿನವೂ ಚಳಿಯ ಅನುಭವ ಇರುತ್ತಿದೆ. ಮೈ ಬೀರಿಯದಂತೆ ತೆಂಗಿನ ಎಣ್ಣೆಯನ್ನು ಸವರಿಕೊಂಡು ಇರಬೇಕಾದ ಸಂದರ್ಭ ಉಂಟಾಗುತ್ತಿದೆ ಎನ್ನುತ್ತಾರೆ ಹಳ್ಳಿಗರು.

ಮಂಜಿನ ಮುಸುಕು.....

ಬೆಳಗ್ಗೆ ಎಂದಿ ನಂತೆ ವಾಕಿಂಗ್ ಹೊರಟರೆ ಆಶ್ಚರ್ಯವೋ ಆಶ್ಚರ್ಯ. ದಾರಿಯೇ ಗೊತ್ತಾಗದಷ್ಟು ಮಂಜು ಆವರಿಸಿಕೊಳ್ಳುತ್ತಿದೆ. ವಾಹನ ಸವಾರರಿಗೆ ಈ ಮಂಜಿನ ನಡುವೆ ಲೈಟ್ ಹೊತ್ತಿಸಿಕೊಂಡೇ ಹೋಗಬೇಕಾದ ತಾಪತ್ರಯ. ಸಾಕಷ್ಟು ಸವಾರರು ಬೆಳ್ಳಂಬೆಳಗ್ಗೆ ಪ್ರಯಾಣವನ್ನು ವಿಳಂಬವಾಗಿ ಆರಂಭಿಸುತ್ತಿದ್ದಾರೆ. ಕೆಲವರು ಅನಿವಾರ್ಯತೆ ಇದ್ದರೆ ಬೆಚ್ಚಗಿನ ಉಡುಪಗಳನ್ನು ಧರಿಸಿ ತೆರಳುವುದು ಕಂಡುಬರುತ್ತಿದೆ. ಈ ಮಧ್ಯೆ ವಾಕಿಂಗ್ ಮಾಡುವ ಮಧ್ಯವಯಸ್ಕರರು ಮೈಚಳಿ ಬಿಟ್ಟು ಓಡಾಡುತ್ತಿದ್ದಾರೆ. ಹಿರಿಯರು ಚಳಿಯ ಅಬ್ಬರಕ್ಕೆ ಬೆಳಗಿನ ಓಡಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ads

A PHP Error was encountered

Severity: Warning

Message: session_write_close(): Session callback expects true/false return value

Filename: Unknown

Line Number: 0

Backtrace:

A PHP Error was encountered

Severity: Warning

Message: session_write_close(): Failed to write session data using user defined save handler. (session.save_path: /var/www/sirsisamachar/application/cache/sessions)

Filename: Unknown

Line Number: 0

Backtrace: