ಸ್ನೇಹಕುಂಜ ಆರೋಗ್ಯಧಾಮಕ್ಕೆ ರಾಣಿ ಚೆನ್ನಭೈರಾದೇವಿ ಪ್ರಶಸ್ತಿ ಪ್ರದಾನ

  • Dec/23/2022
ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಡಾ. ಕುಸುಮಾ ಸೊರಬ ಸೇವೆಯನ್ನು ಸ್ಮರಿಸಿ `ಸ್ನೇಹಕುಂಜ’ ಆರೋಗ್ಯಧಾಮಕ್ಕೆ `ರಾಣಿ ಚೆನ್ನಭೈರಾದೇವಿ' ಪ್ರಶಸ್ತಿ ಪ್ರದಾನ

ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿರುವ ಖ್ಯಾತ ಪರಿಸರ ಹೋರಾಟಗಾರರಾಗಿದ್ದ ಗ್ರಾಮಾಂತರ ಭಾಗದ ಅಲಕ್ಷಕ್ಕೆ ಒಳಗಾದ ಸಮುದಾಯದ ಆರೋಗ್ಯ ಸೇವೆಗಾಗಿ ದುಡಿಯುತ್ತಲೇ ಮಡಿದ ಡಾ. ಕುಸುಮಾ ಸೊರಬ ಅವರ ಸೇವೆಯನ್ನು ಸ್ಮರಿಸಿ ಅವರು ಸ್ಥಾಪಿಸಿದ "ಸ್ನೇಹಕುಂಜ" ಆಸ್ಪತ್ರೆಗೆ ಮುಂಬೈಯ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರಸ್ತುತ ವರ್ಷದ ಕರಿಮೆಣಸಿನ ರಾಣಿ `ಚೆನ್ನಭೈರಾದೇವಿ ಪ್ರಶಸ್ತಿ'ಯನ್ನು ಪ್ರದಾನಿಸಿ ಅಭಿನಂದಿಸಿದೆ.

ಡಿ. ೨೨ ರಂದು ಸ್ನೇಹಕುಂಜ ಆಸ್ಪತ್ರೆಯ ಆವರಣದಲ್ಲಿ `ನಾಗರಿಕ' ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ; ಉಡುಪಿಯ ಹೆಸರಾಂತ ನಾಟಕ ಅಭಿನೇತ್ರಿ, ಲೇಖಕಿ, ಸಂಘಟಕಿ ಶ್ರೀಮತಿ ಪೂರ್ಣಿಮಾ ಎಸ್. ಹಿರಿಯಡ್ಕ ಹಾಗೂ ಹೊನ್ನಾವರದ ನಿವೃತ್ತ ಪ್ರಾಧ್ಯಾಪಕ ಸಾಹಿತಿ ಡಾ. ಶ್ರೀಪಾದ ಶೆಟ್ಟಿಯವರ ಉಪಸ್ಥಿತಿಯಲ್ಲಿ ಸ್ನೇಹಕುಂಜ ಟ್ರಸ್ಟಿನ ಪ್ರಸ್ತುತ ಕಾರ್ಯದರ್ಶಿಯಾದ ನರಸಿಂಹ ಹೆಗಡೆಯವರಿಗೆ ಫಲತಾಂಬೂಲದೊಂದಿಗೆ ಸನ್ಮಾನ ಪತ್ರ, ಶಾಲು, ನಗದು, ಸ್ಮರಣಿಕೆ ನೀಡಿ ಶುಭ ಹಾರೈಸಲಾಯಿತು.

ಡಾ. ಶ್ರೀಪಾದ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿ ಸ್ನೇಹಕುಂಜ ಆಸ್ಪತ್ರೆಯ ಹಿರಿಮೆಯನ್ನು ವಿವರಿಸಿ ಅಭಿನಂದಿಸಿದರೆ ಶ್ರೀಮತಿ ಪೂರ್ಣಿಮಾ ಹಿರಿಯಡ್ಕ ಅವರು ಚೆನ್ನಭೈರಾದೇವಿ ಹಾಗೂ ಡಾ. ಕುಸುಮಾ ಸೊರಬ ಅವರ ಸಮಾಜಮುಖಿ ವ್ಯಕ್ತಿತ್ವವನ್ನು ತುಲನೆ ಮಾಡಿ ಬಹು ಅರ್ಥಪೂರ್ಣವಾಗಿ ಅಭಿನಂದಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ನಾಗರಿಕ ಪತ್ರಿಕೆಯ ಕೃಷ್ಣಮೂರ್ತಿ ಹೆಬ್ಬಾರ ಅವರು ಡಾ| ಕುಸುಮಾ ಸೊರಬ ಹಾಗೂ ತಮ್ಮ ನಡುವಿನ ಸ್ನೇಹವನ್ನು ನೆನಪಿಸುತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಜೀವವೈವಿಧ್ಯತೆ, ವನಸಂಪತ್ತಿನ ಕುರಿತು ಅವರ ಕಾಳಜಿಯನ್ನು ಸ್ಮರಿಸಿದರು. ಮುಂದಿನ ಪೀಳಿಗೆಗೆ ಅದನ್ನು ಉಳಿಸಿ ಕಾಪಿಡಲು ಅವರು ಪಟ್ಟ ಶ್ರಮವನ್ನು ವಿವರಿಸಿದ ಕೃಷ್ಣಮೂರ್ತಿ ಹೆಬ್ಬಾರ, ೧೫-೧೬ನೇ ಶತಮಾನದಲ್ಲಿ ವೀರ-ಧೀರತನದಿಂದ ಅರ್ಧ ಶತಮಾನ ರಾಜ್ಯವಾಳಿದ "ಚೆನ್ನಭೈರಾದೇವಿ" ಹೆಸರಿನ ಪ್ರಶಸ್ತಿಯನ್ನು ಜಿಲ್ಲೆಯ ಹೆಮ್ಮೆಯ ಆರೋಗ್ಯಧಾಮವಾದ `ಸ್ನೇಹಕುಂಜಕ್ಕೆ’ ಪ್ರದಾನಿಸುತ್ತಿರುವುದು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ. ಪ್ರತಿಷ್ಠಾನದ ಸೂಕ್ಷ್ಮ ಕಾರ್ಯಕ್ಕೆ ಸದಾ ತಮ್ಮ ಸಹಕಾರ ಇದೆ ಎಂದರು.

ಆರಂಭದಲ್ಲಿ ಸ್ನೇಹಕುಂಜದ ಕಾರ್ಯಕರ್ತೆಯರ ಪ್ರಾರ್ಥನೆ ಹಾಗೂ ಸಭಾಧ್ಯಕ್ಷರು, ಅಭ್ಯಾಗತರ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಸರ್ವರನ್ನೂ ಸ್ವಾಗತಿಸಿ, ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಕಳೆದ ೧೩ ವರ್ಷಗಳಿಂದ ನಡೆಸಿಕೊಂಡು ಬಂದ ಸಾಮಾಜಿಕ, ಸಾಹಿತ್ಯಿಕ, ಜಾನಪದ, ಐತಿಹಾಸಿಕ ಕಾರ್ಯದ ಕುರಿತು ವಿವರಿಸಿದರಲ್ಲದೆ "ಚೆನ್ನಭೈರಾದೇವಿ" ಹೆಸರಿನಲ್ಲಿ ಪ್ರಶಸ್ತಿ ನೀಡುವ ಉದ್ದೇಶವನ್ನು ವಿವರಿಸಿದರು.

ಅರುಣ ಅವರು ಕಾರ್ಯಕ್ರಮ ನಿರೂಪಿಸಿದರು. ಕೇಶವ ಕಿಬ್ಳೆ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹಿರಿ-ಕಿರಿಯ ಸಿಬ್ಬಂದಿಗಳು, ಸ್ನೇಹಕುಂಜದ ಹಿರಿಯ ವೈದ್ಯರು, ಕುಸುಮಾ ಸೊರಬ ಕಾಲದಿಂದಲೂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರಾದ ಡಾ.ಮಹೇಶ ಹಾಜರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 

ads

A PHP Error was encountered

Severity: Warning

Message: session_write_close(): Session callback expects true/false return value

Filename: Unknown

Line Number: 0

Backtrace:

A PHP Error was encountered

Severity: Warning

Message: session_write_close(): Failed to write session data using user defined save handler. (session.save_path: /var/www/sirsisamachar/application/cache/sessions)

Filename: Unknown

Line Number: 0

Backtrace: