
ಶ್ರೀ ಕ್ಷೇತ್ರ ಉಳವಿಯ ನೂತನ ರಥಬೀದಿ ಉದ್ಘಾಟನೆ
- Feb/01/2023
ಶ್ರೀ ಕ್ಷೇತ್ರ ಉಳವಿ ಯ ನೂತನ ರಥ ಬೀದಿ ಮತ್ತು ಅಂಡರ್ ಗ್ರೌಂಡ್ ವಿದ್ಯುತ್ ಪೂರೈಕೆಯನ್ನು ಶಾಸಕ ಆರ್.ವಿ.ದೇಶಪಾಂಡೆ ಇಂದು ಉಳವಿ ಯ ಜಾತ್ರೆಯ ಜನ ಸ್ತೋಮಗಳ ನಡುವೆ ಚಾಲನೆ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಹಿಂದೆ ಜೊಯಿಡಾ ತಾಲೂಕು ಅಭಿವೃದ್ಧಿ ದೃಷ್ಟಿಯಿಂದ ತುಂಬಾ ಹಿಂದೆ ಇತ್ತು. ನಾನು ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಈಗ ತಾಲೂಕು ತುಂಬಾ ಬದಲಾವಣೆ ಕಂಡಿದೆ. 7 ಕೋಟಿ ರೂಗಳ ವೆಚ್ಚದಲ್ಲಿ ಈ ಸುಂದರ ರಥಬೀದಿ ನಿರ್ಮಾಣವಾಗಿದ್ದು ರಥ ಬೀದಿಗೆ ಆಧುನಿಕ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡಲಾಗಿದ್ದು ಅತ್ಯಂತ ಸುಂದರ ವಿಶಾಲ ರಥ ಬೀದಿಯಾಗಿದೆ. ಉಳವಿ ಯ ಸುತ್ತಮುತ್ತಲು 1.5 ಕೋಟಿ ವೆಚ್ಚದಲ್ಲಿ ಶಾಲೆ , ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿ ನಡೆದಿದೆ. ಅಭಿವೃದ್ಧಿ ನಿರಂತರ ಎಂದರು.
ವ್ಯವಸ್ಥಾಪಕ ಶಂಕರಯ್ಯ ಕಲ್ಮಠ ಶಾಸ್ತ್ರಿ ಮಾತನಾಡಿ , ಇಂದು ಸಣ್ಣ ರಥ ಎಳಯುವ ಸುಸಂದರ್ಭದಲ್ಲಿ ಬಂದ ಶಾಸಕ ಆರ್.ವಿ. ದೇಶಪಾಂಡೆ ಸತತ ಪ್ರಯತ್ನದಿಂದ ರೂ7 ಕೋಟಿ ವೆಚ್ಚದ ರಥ ಬೀದಿ ಜೊತೆಗೆ ಜೊಯಿಡಾ ದಿಂದ ಬಂದಿರುವ ಅಂಡರ್ ಗ್ರೌಂಡ್ ವಿದ್ಯುತ್ ಗೂ ಚಾಲನೆ ನೀಡಿ ನಮ್ಮ ಉಳವಿ ಯ ಸರ್ವಾಂಗೀಣ ಅಭವೃದ್ಧಿಗೆ ಕಾರಣರಾಗಿದ್ದಾರೆ ಎಂದರು.
ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಮೊಕಾಶಿ ಮಾತನಾಡಿ, ಉಳವಿ ಗ್ರಾ.ಪಂ ಅಭಿವೃದ್ಧಿಯ ಜೊತೆಗೆ ಅಕ್ಕ ಪಕ್ಕದ ಹಳ್ಳಿ ಗರ ಎಲ್ಲಾ ಸಮಸ್ಯೆಗೆ ದೇಶಪಾಂಡೆ ಸ್ಪಂದಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡಲು ಅವರನ್ನು ಮತ್ತೆ ಆಯ್ಕೆ ಮಾಡೋಣ ಎಂದರು.
ಗಣ್ಯರಿಗೆ ಸನ್ಮಾನ ನಡೆಯಿತು.
ಗ್ರಾಪಂ ಅಧ್ಯಕ್ಷೆ ಮಂಗಲಾ ಮಿರಾಶಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ , ಟ್ರಸ್ಟ್ ಉಪಾಧ್ಯಕ್ಷ ಸಂಜಯ್ ಕಿತ್ತೂರ ಇತರರು ಉಪಸ್ಥಿತರಿದ್ದರು.