
ಶಾಸ್ತ್ರೀಯ ಕಲೆಗಳ ಮೂಲ ಜನಪದ
- Feb/02/2023
"ಶಾಸ್ತ್ರೀಯ ಕಲೆಗಳ ಮೂಲ ಜನಪದವೇ ಆಗಿದ್ದು ನವೀನರ ಪ್ರಭಾವದಿಂದಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಅರ್ಥಹೀನ ಪ್ರದರ್ಶನದಲ್ಲಿ ಅಭಿವ್ಯಕ್ತವಾಗುತ್ತಿರುವುದು ಬೇಸರದ ಸಂಗತಿ.
ವ್ಯವಸ್ಥಿತವಾಗಿ ಕಲಿಯುವ ಶ್ರದ್ಧೆ, ತಾಳ್ಮೆಯ ಕೊರತೆ ಎದ್ದು ಕಾಣುತ್ತಿದೆ. ಸೋಶಿಯಲ್ ಮಿಡೀಯಾಗಳಲ್ಲಿ ಪ್ರಚಾರದ ಗೀಳಿಗೆ ಬಿದ್ದು ಕಾಟಾಚಾರಕ್ಕೆ ಕಲಿಯುವ ಯುವಮನಸ್ಸುಗಳನ್ನು ಬಹುತೇಕ ಕಡೆಗಳಲ್ಲಿ ಕಾಣಬಹುದಾಗಿದೆ. ಕಲೆ ಮತ್ತು ಸಂಸ್ಕೃತಿಗಳ ರಕ್ಷಣೆಗೆ ಇರುವ ಇಲಾಖೆಗಳ/ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹಳಷ್ಟು ಜನಪದ ಕಲೆಗಳು ಬೆಳಕಿಗೆ ಬಾರದೆ ನಶಿಸಿ ಹೋಗುತ್ತಿವೆ.
ಆಧುನಿಕ ಸಮಾಜ ನಮ್ಮ ಪುರಾತನ ಶ್ರೀಮಂತ ಸಂಸ್ಕೃತಿಗಳ ಅಧ್ಯಯನ ಮಾಡಿ ಹೆಮ್ಮೆಯಿಂದ ಪ್ರಚುರ ಪಡಿಸುವ ಅಗತ್ಯವಿದೆ"
ಎಂದು ನಾಗರಾಜ ಜೋಶಿಯವರು ನುಡಿದರು. ನೆಮ್ಮದಿ ಕುಟೀರದಲ್ಲಿ ಜರುಗಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಶಿರಸಿ ಜಿಲ್ಲೆ ಮತ್ತು ನೆಮ್ಮದಿ ಮಾಸದ ಮಾತು ಕಾರ್ಯಕ್ರಮದಲ್ಲಿ ಸಾಂಸ್ಕೃತಿಕತೆ ನವೀನ(ರ) ಪ್ರಭಾವ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
ಅಭಾಸಾಪ ವತಿಯಿಂದ
ಜಗದೀಶ ಭಂಡಾರಿಯವರು ಅಧ್ಯಕ್ಷತೆ ವಹಿಸಿದ್ದರು. ಗಣಪತಿ ಭಟ್ ವರ್ಗಾಸರ ಅವರು ಉಪನ್ಯಾಸಕರನ್ನು ಪರಿಚಯಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ದಾಕ್ಷಾಯಿಣಿ ಪಿ.ಸಿ.ಯವರ ಗಣೇಶನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಭಾಸಾಪ ಜಿಲ್ಲಾ ಕಾರ್ಯದರ್ಶಿ ಕೃಷ್ಣ ಪದಕಿಯವರು ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಎ ರಾಮ ಭಟ್, ಡಿ.ಎಮ್ ಭಟ್ ಕುಳವೆ, ವಿ ಪಿ ಹೆಗಡೆ ವೈಶಾಲಿ, ಡಾ ಶೈಲಜಾ ಮಂಗಳೂರು, ನರಸಿಂಹ ಭಂಡಾರಕರ, ಅನಿಲ ಕರಿ, ಎಸ್ ಶ್ರೀನಿವಾಸ, ವಿವೇಕ ಭಟ್, ವಾಸುದೇವ ಶಾನಭಾಗ, ಡಾ ಮಂಜುಳಾ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.