ಬೇನೆ ಕವಿತೆ

  • Jul/17/1968
ಬೇನೆ!

ಹಾಸಿಗೆಯಲಿ ಮಲಗಿ
ಕೆಮ್ಮಿ , ನರಳಿ ,ಅತ್ತಿತ್ತ ಹೊರಳಿ
ಬೇನೆ ಬಂದಿಹುದೆಂದು ತಥ್ಯ ತನೆಗೆನ್ನುತ್ತ
ಎಲ್ಲರಿಂ ಹೆಚ್ಚಿಗೆಯ ತಿಂಡುಂಡು ತೇಗಿ
ಮತ್ತೆ ಹಸಿವಿಲ್ಲೆಂದು ಲೋಟ ಹಾಲನ ಕುಡಿದು
ಪುನಃ ಶಖ್ಯೆಯ ಸೋಬಾನೆ
[ ಆಯ್ಯೋ ಬೇನೆ ]

ಎಂದೂ ಬಾರದ ಬೇನೆ ಇಂದು ಬಂದಿಹುದೆನುತ
ಬಂದವರೊಡೆ ಒಸಗೆಯುಸುರಿ,
ಡಾಕ್ಟರರಿಗೆ ಇಲ್ಲದ ಬೇನೆಯ ನೆವದಿ,
ಬಿಲ್ಲತೆತ್ತು, ಕೊಟ್ಟೋಷಧಿಯ ಹೀರಿ,
ಗುಳಿಗೆಯ ನುಂಗಿ ನೀರ ಕುಡಿದು
ಮತ್ತೊಮ್ಮೆ ಕೆಮ್ಮಿ,, ಹಾಸಿಗೆಯ ಸೇರಿ ಬಿಟ್ಟು...
[ ರಟ್ಟಾದರೆ ಗುಟ್ಟು ] ಬೇನೆಯಲ್ಲವೆ ಮತ್ತೆ.....

“ಆಲದ ಮರದ ದೆವ್ವದ ಪೀಡೇ”
ಎಂದಾರೋ ಉಸುರಿಸಿದರು.
ಸರಿ, ಬಂದ ಚೌಡಪ್ಪಯ್ಯ ನೋಡಿ “ನೋಟ"ವ ಮತ್ತೆ
ಕೋಳಿಯೊಂದನ್ನು ಕೊಡಬೇಕೆನೆ ---
ಬಿಟ್ಟೋಡಿಬಿಡಬೇಕೆ ಒಡನೆ ಬೇನೆ?
ವ್ಹಾ!

-ಜಿ, ಮಹಾಬಲೇಶ್ವರ ಭಟ್
ads